ದಕ್ಷಿಣ ಭಾರತದ ಖ್ಯಾತ ನಟಿ ಶಕೀಲಾ ಅವರ ಜೀವನ ಕಥೆ ತೆರೆಮೇಲೆ ಬರುತ್ತೆ ಎಂಬ ಮಾತು ಹಲವು ದಿನಗಳಿಂದ ಕೇಳಿ ಬರುತ್ತಲೇ ಇದೆ. ಒಂದು ವೇಳೆ ಸಿನಿಮಾ ಸೆಟ್ಟೇರಿದ್ರು ಶಕೀಲಾ ಪಾತ್ರದಲ್ಲಿ ಯಾವ ನಟಿ ಅಭಿನಯಿಸಬಹುದು ಎಂಬ ಕುತೂಹಲ ಸಿನಿ ಅಭಿಮಾನಿಗಳನ್ನ ಕಾಡುತ್ತಿತ್ತು. ಈ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. 16ನೇ ವಯಸ್ಸಿನಲ್ಲೇ ಚಿತ್ರರಂಗ ಪ್ರವೇಶ ಮಾಡಿದ್ದ ಶಕೀಲಾ, ನೀಲಿ ಸಿನಿಮಾಗಳಿಂದಲೇ ಹೆಚ್ಚು ಖ್ಯಾತಿಗಳಿಸಿಕೊಂಡಿದ್ದರು. ಹೀಗಾಗಿ, ಈ ಪಾತ್ರಕ್ಕೆ ಯಾರೂ ಒಪ್ಪುತ್ತಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು. ಇದೀಗ, ಶಕೀಲಾ ಪಾತ್ರವನ್ನ ಬೆಳ್ಳಿತೆರೆ ಮೇಲೆ ಮಾಡಲು ಸ್ಟಾರ್ ನಟಿಯೊಬ್ಬಳು ಒಪ್ಪಿಕೊಂಡಿದ್ದಾರೆ. ಬಹುಭಾಷೆಯಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ಕನ್ನಡದ ಸ್ಟಾರ್ ನಿರ್ದೇಶಕ ಆಕ್ಷನ್ ಕಟ್ ಹೇಳಲಿದ್ದಾರೆ. ಹಾಗಿದ್ರೆ, ಯಾರದು.?